ಒಲುಮೆಯ ಕವಿ ಕೆ . ಎಸ್ ನರಸಿಂಹಸ್ವಾಮಿಯವರ ಜೀವನ ಪ್ರೀತಿ
ಆಧುನಿಕ ಕನ್ನಡಸಾಹಿತ್ಯ ಪರಂಪರೆಯಲ್ಲಿ ಮತ್ತೆ-ಮತ್ತೆ ಕೇಳಿ ಬರುವ ಹೆಸರು ಕೆ.ಎಸ್.ನರಸಿಂಹಸ್ವಾಮಿ ಅವರದು. ಅದಕ್ಕೆ ಕಾರಣ ಅವರು ಕಾವ್ಯದ ಆಕರವನ್ನಾಗಿ ಮಾಡಿಕೊಂಡ ವಿಷಯವಸ್ತು. ಎಲ್ಲೋ ಮನದ ಮೂಲೆಯಲ್ಲಿದ್ದ ಪ್ರೇಮ ಹಾಗೂ ನಾಲ್ಕು ಗೋಡೆಗಳಿಗಷ್ಟೇ ಸೀಮಿತವಾಗಿದ್ದ ದಾಂಪತ್ಯ ಭಾವವನ್ನು ಕವಿತೆಯ ವಸ್ತುವನ್ನಾಗಿಸಿ, ಪ್ರೇಮಕವಿಯೆಂದೇ ಗುರುತಿಸಿ ಕೊಂಡವರು. ಅಷ್ಟಕ್ಕೆ ಮಾತ್ರ ಸೀಮಿತವಾಗದೆ ಬರಿಗೊಡಗಳಿಗೆ ಸಮಾಧಾನ ಹೇಳಬಲ್ಲಂತಹ ತೀಕ್ಷ್ಮವಾದ ಪ್ರತಿಕ್ರಿಯೆಯನ್ನು ತೋರಿಸಿದವರು. ಇಂತಹ ಹೆಮ್ಮೆಯ ಕವಿ ಲೋಕದಿಂದ ಚಿರನಿದ್ರೆಗೆ ಜಾರಿದ್ದರೂ ಅವರ ಕಾವ್ಯ ಕುಸುಮ ಸದಾ ಗಮ ಗಮಿಸುತ್ತಲೇ ಇದೆ. ಮಾತ್ರವಲ್ಲ ಕವಿಯ ಸೊಗಸಾದ ರಚನೆಗೆ ಹಿಡಿದ ಕನ್ನಡಿಯಂತಿದೆ. ಇಂತಹ ಅದ್ವಿತೀಯ ಪ್ರೇಮ ಮಾಂತ್ರಿಕನ ಸಾಧನೆಗೆ ಸಂದಿರುವುದೇ 'ಚಂದನ' ವೆಂಬ ಅಭಿನಂದನ ಗ್ರಂಥ.
ಕೆ.ಎಸ್.ನರಸಿಂಹಸ್ವಾಮಿ ಅವರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಎಂಬಲ್ಲಿ 26-1-1915ರಲ್ಲಿ ಸುಬ್ಬರಾಯರು ಮತ್ತು ನಾಗಮ್ಮನವರ ಗರ್ಭದಲ್ಲಿ ಜನಿಸಿದರು. ಮೈಸೂರಿನಲ್ಲಿ ಪದವಿ ಶಿಕ್ಷಣವನ್ನು ಪಡೆದ ಇವರಿಗೆ ವೆಂಕಮ್ಮನವರು ಬಾಳಸಂಗಾತಿಯಾದರು. ಬಹುಶಃ ಇವರ ನೆನಪಿನಲ್ಲಿಯೇ ಸುಮಾರು ಹದಿನಾರು ಕವನ ಸಂಕಲನಗಳು ಪ್ರಕಟಗೊಂಡಿರಬಹುದು. 'ಮೈಸೂರು ಮಲ್ಲಿಗೆ'ಯ ಕವಿಯೆಂದೇ ಚಿರಪರಿಚಿತರಾದ ಇವರು ಐರಾವತ, ದೀಪದಮಲ್ಲಿ, ಇರುವಂತಿಗೆ, ಶಿಲಾಲತೆ, ತೆರೆದಬಾಗಿಲು ಮೊದಲಾದವುಗಳು. ಇವುಗಳಲ್ಲದೆ ಅನುವಾದ, ವಿಮರ್ಶೆ, ಸಣ್ಣಕತೆ ಹೀಗೆ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ ಶ್ರೇಷ್ಠ ಕನಸುಗಾರನಿಗೆ ಒಂದು ಶತಮಾನವೇ ಕಳೆದಿದೆ. ಈ ಹೊತ್ತಿನಲ್ಲಿ ಅವರ ನೆನಪು ಸದಾ ಕಾಡುತ್ತಿದೆ. ಮಾತ್ರವಲ್ಲ ನಿಚ್ಚ ಅನುರಣಿಸುತ್ತಿದ್ದ
"ಒಲುಮೆಯ ಕವಿ ಕೆ . ಎಸ್ ನರಸಿಂಹಸ್ವಾಮಿಯವರ ಜೀವನ ಪ್ರೀತಿ", IJSDR - International Journal of Scientific Development and Research (www.IJSDR.org), ISSN:2455-2631, Vol.11, Issue 8, page no.b43-b45, August-2026, Available :https://ijsdr.org/papers/IJSDR2608107.pdf
Volume 11
Issue 8,
August-2026
Pages : b43-b45
Paper Reg. ID: IJSDR_311427
Published Paper Id: IJSDR2608107
Downloads: 000104
Research Area: Languages
Country: Mysore, Karnataka, India
ISSN: 2455-2631 | IMPACT FACTOR: 9.15 Calculated By Google Scholar | ESTD YEAR: 2016
An International Scholarly Open Access Journal, Peer-Reviewed, Refereed Journal Impact Factor 9.15 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator
Publisher: IJSDR(IJ Publication) Janvi Wave