INTERNATIONAL JOURNAL OF SCIENTIFIC DEVELOPMENT AND RESEARCH International Peer Reviewed & Refereed Journals, Open Access Journal ISSN Approved Journal No: 2455-2631 | Impact factor: 8.15 | ESTD Year: 2016
open access , Peer-reviewed, and Refereed Journals, Impact factor 8.15
ಜನಪದ ಎನ್ನುವಂಥದ್ದು ಯಾವುದೇ ಪ್ರದೇಶದ ಭಾಷಿಕ, ಜಾತಿ ಪಂಗಡಗಳಿಗೆ ಆತೀತವಾದ ಜನಪದ ವ್ಯಕ್ತಿಗಳಿಂದ ರೂಪಗೊಂಡಿದ್ದು, ನಿರ್ದಿಷ್ಟ ಜೀವನ ವಿಧಾನ, ಜೀವನ ದೃಷ್ಟಿಯನ್ನುಳ್ಳ ಜನರು ಇಲ್ಲಿ ಕಂಡು ಬರುತ್ತಾರೆ. ಇವರು ಸಾಂಪ್ರದಾಯಿಕ ವೃತ್ತಿಯವರಾಗಬಹುದು, ತಮ್ಮ ಬದುಕನ್ನು ಸ್ವತಃ ಸಮಾಜದ ಕೊರತೆಗೆ ಅಥವಾ ತುಂಬು ಜೀವನಕ್ಕೆ ತೆರೆದುಕೊಂಡುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರಿರಬಹುದು. ಇಂಥವರನ್ನು ನಾನು 'ಜನಪದರು' ಎಂದು ಕರೆಯುತ್ತೇನೆ. (ಹಿ.ಸಿ.ರಾಮಚಂದ್ರೇಗೌಡರು). ಇಂತವರ ಬದುಕೇ ಜನಪದ ಜೀವನ, ಜನಪದ ಸಂಸ್ಕೃತಿ, ಈ ಜನಪದರ ಉತ್ಪತ್ತಿಯೇ ಜಾನಪದ. ಈ ಜಾನಪದ ಎನ್ನುವಂಥದ್ದು ಮನರಂಜನೆಯ ಸರಕಲ್ಲ. ನಿರ್ದಿಷ್ಟ ಜೀವನ ವಿಧಾನ. ಬರಿಯ ಕಲೆ, ಸಾಹಿತ್ಯ, ಕುಣಿತ ಇದರಲ್ಲಿಲ್ಲ. ಅದರೊಳಗೆ ಸಾವಿರಾರು ವರ್ಷಗಳಿಂದ ಉಳಿದು ಬೆಳೆದು ಬಂದಿರುವ ವೈದ್ಯ ಪದ್ಧತಿ, ತಂತ್ರಜ್ಞಾನ, ಆಹಾರ, ಕೃಷಿ ಸಂಬAಧಿತ ಜ್ಞಾನ, ಮನೋವೈಜ್ಞಾನಿಕ ಪರಿಹಾರ ಮಾರ್ಗಗಳಿವೆ. ಇದರರ್ಥ ಜನಪದರ ಉತ್ಪತ್ತಿಯಾದ ಜಾನಪದದಲ್ಲಿ ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಘನೀಭವಿಸಿದ ತಿಳುವಳಿಕೆಯಿದೆ; ಅರಿವು ಇದೆ; ಜ್ಞಾನವಿದೆ. ಸಂಸ್ಕೃತಿ ಎನ್ನುವುದು ಮನುಷ್ಯನನ್ನು ಪ್ರಾಣಿ ಪ್ರಪಂಚದಿAದ ಪ್ರತ್ಯೇಕಗೊಳಿಸಿ, ಮನುಷ್ಯ ಸಮಾಜದ ಆ ವರ್ತನೆಗಳನ್ನು ವಿವರಿಸುವ ಒಂದು ವಿಶಿಷ್ಟ ಪರಿಕಲ್ಪನೆಯಾಗಿದೆ. ಸಂಸ್ಕೃತಿ ಒಂದು ಜನಾಂಗದ ಅಥವಾ ಒಂದು ಸಮಾಜದ ಸಮಸ್ತ ಕ್ರಿಯೆಗಳನ್ನು, ಅಭಿರುಚಿಗಳನ್ನು ಒಳಗೊಳ್ಳುತ್ತದೆ. ವ್ಯಕ್ತಿಗಳು ಏನಿದ್ದರೂ ಈ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಹರಿಸುತ್ತಾರೆ ಎಂಬುದು ಟಿ.ಎಸ್.ಎಲಿಯಟ್ ಅವರ ಅಭಿಪ್ರಾಯ. ಮನುಷ್ಯನು ಒಂದು ಸಮಾಜದ ಸದಸ್ಯನಾಗಿ ಗಳಿಸಿಕೊಂಡ ಬುದ್ಧಿ, ನಂಬಿಕೆ, ಕಲೆ, ನೀತಿ, ಸಂಪ್ರದಾಯ, ಕಾನೂನು ಹಾಗೂ ಅವನ ಕಲಿಕೆ ಹವ್ಯಾಸಗಳ ಸಂಕೀರ್ಣ ಮೊತ್ತವೇ ಸಂಸ್ಕೃತಿ ಎಂದು ಮಾನವಶಾಸ್ತçಜ್ಞ, ಇ.ಬಿ.ಟೈಲರ್ ವಿವರಿಸಿದ್ದಾನೆ.
Keywords:
Cite Article:
"Janapada Samskrithi", International Journal of Science & Engineering Development Research (www.ijsdr.org), ISSN:2455-2631, Vol.8, Issue 4, page no.104 - 105, April-2023, Available :http://www.ijsdr.org/papers/IJSDR2304020.pdf
Downloads:
000336256
Publication Details:
Published Paper ID: IJSDR2304020
Registration ID:204899
Published In: Volume 8 Issue 4, April-2023
DOI (Digital Object Identifier):
Page No: 104 - 105
Publisher: IJSDR | www.ijsdr.org
ISSN Number: 2455-2631
Facebook Twitter Instagram LinkedIn